ಕೋಲಾರ ಮಾ 16:ಬಾಲ್ಯ ವಿವಾಹದ ನಿಷೇಧ ಕುರಿತು ಸಮಾಜದಲ್ಲಿ ಅರಿವು, ಜಾಗೃತಿ ಮೂಡಿಸಬೇಕು ಎಂದು ಹೂಹಳ್ಳಿ ನಾಗರಾಜ್ ಹೇಳಿದರು. ಉತ್ತರ ವಿಶ್ವ ವಿದ್ಯಾಲಯ, ಸಮಾಜಕಾರ್ಯ ವಿಭಾಗ ಮತ್ತು ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಕೆ.ಜಿ.ಎಫ್ ನ ಚಿಮಲಬಂಡಹಳ್ಳಿ ಗ್ರಾಮದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷರಾದ ಹೂಹಳ್ಳಿ ನಾಗರಾಜ್ ಮಾತನಾಡಿದರು. ಬಾಲ್ಯ ವಿವಾಹ ಮಕ್ಕಳ ಬಾಲ್ಯವನ್ನು ಕಸಿಯುವಂತಹ ಅನಿಷ್ಠ ಪದ್ಧತಿಯಾಗಿದ್ದು ಮಕ್ಕಳ ಭವಿಷ್ಯವೂ ಹಾಳಾಗುತ್ತದೆ. ಸಾಮಾಜಿಕ, ಆರ್ಥಿಕ ಮತ್ತು ಮೂಡನಂಬಿಕೆಗಳ ಪರಿಣಾಮದಿಂದ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿವೆ. ಈ ಸಮಸ್ಯೆಯನ್ನು ಬೇರು ಮಟ್ಟದಿಂದಲೇ ನಿರ್ಮೂಲನೆ ಮಾಡಬೇಕು. ಸ್ವಯಂ ಸೇವಾ ಸಂಸ್ಥೆಗಳು ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಮತ್ತು ಸಮುದಾಯಗಳು ತಮ್ನ ಮಕ್ಕಳ ಜವಾಬ್ದಾರಿ ನೀವೆ ತೆಗೆದುಕೊಂಡು ಬಾಲ್ಯ ವಿವಾಹ ನಿಲ್ಲಿಸಿ ಮಕ್ಕಳನ್ನು ಶಾಲೆಗೆ ಕಳಿಸಿ ಬಾಲ್ಯ ವಿವಾಹ ಮುಕ್ತ ಜಿಲ್ಲೆಯಾಗಿ ಮಡೋಣ ಎಂದು ತಿಳಿಸಿದರು. ಈ ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶಿವಕುಮಾರ್,ಅಂಗನವಾಡಿ ಕಾರ್ಯಕರ್ತೆ ವಿಮಲಮ್ಮ,ಜನಾಧಿಕಾರ ಸದಸ್ಯ ಸುಬ್ರಮಣ್ಯ,ಸಮಾಜಕಾರ್ಯ ವಿಧ್ಯಾರ್ಥಿಗಳಾದ ಅರುಣ್,ಕೋಲಾರ ಮಾ 16:ಬಾಲ್ಯ ವಿವಾಹದ ನಿಷೇಧ ಕುರಿತು ಸಮಾಜದಲ್ಲಿ ಅರಿವು, ಜಾಗೃತಿ ಮೂಡಿಸಬೇಕೆಂದರು
None