05-03-2021ರಂದು ಕೋಲಾರ ನಗರದ ಪಾಲಸಂದ್ರ ದಲ್ಲಿ ನೆಹರು ಯುವ ಕೇಂದ್ರ ,ನಗರಸಭೆ ಮತ್ತು ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಜಾಗೃತಿ ಅಭಿಯಾನಕ್ಕೆ ಚಾಲನೆ ಕೊಟ್ಟು ಪ್ರಕೃತಿಯ ಮೇಲೆ ಮನುಷ್ಯ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ ಒಂದು ದಿನ ಅವನ ಸಾವಿಗೆ ಕಾರಣನಾಗುತ್ತಾನೆ ಮತ್ತು ಬೀದಿ ಬೀದಿಗಳ ಮೆರವಣಿಗೆ ಮಾಡಿ ಬೀದಿ ಬದಿಯಲ್ಲಿ ಪ್ಲಾಸ್ಟಿಕ್ ಶೇಖರಣೆ ಮಾಡಿ ಗೋಣಿ ಶೀಲಗಳಲ್ಲಿಗೆ ತುಂಬಿ ಮನಯವರಿಗೆ ಪ್ಲಾಸ್ಟಿಕ್ ಬಳಸದ್ದೀರಿ ಎಂದು ಅರಿವು ಮೂಡಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ನಗರಸಭೆ ಸಿಬ್ಬಂದಿ ಅವರು ಇಂದು ಪ್ಲಾಸ್ಟಿಕ್ ಮುಕ್ತ ಅಂಗವಾಗಿ ನೆಹರು ಯುವಕ ಕೇಂದ್ರದ ಆಶ್ರಯದಲ್ಲಿ ನಗರ ಪ್ರದಕ್ಷಿಣೆ ಎಲ್ಲಿ ಪ್ರತಿಯೊಂದು ಮನೆ, ಅಂಗಡಿಗಳನ್ನು ಕರಪತ್ರಗಳನ್ನು ವಿತರಿಸಿ ಅವರಲ್ಲಿ ಜಾಗೃತಿಯನ್ನು ಮೂಡಿಸಿದರು ಸಾಮಾನ್ಯವಾಗಿ ಪ್ರಕೃತಿಗೆ ಎದುರಾಗುತ್ತಿರುವ ಸಮಸ್ಯೆಗಳು ಎಂದರೆ ವಾಯುಮಾಲಿನ್ಯ ಶಬ್ದಮಾಲಿನ್ಯ ನೀರಿನ ಮಾಲಿನ್ಯ ಮಣ್ಣು ಮಾಲಿನ್ಯ ಇದರಲ್ಲಿ ನಾವು ದಿನನಿತ್ಯ ಹೆಚ್ಚು ಬಳಸುವ ಪ್ಲಾಸ್ಟಿಕ್ಕನ್ನು ಮಣ್ಣಿಗೆ ಸೇರಿಸುವುದರಿಂದ ಅಂತರ್ಜಲ ಕಡಿಮೆಯಾಗುತ್ತಿದೆ ನೀರಿನ ಸಮಸ್ಯೆ ಇದೆ ಪ್ಲಾಸ್ಟಿಕ್ಕನ್ನು ಸುಡುವುದರಿಂದ ಹೆಚ್ಚು ರಾಸಾಯನಿಕಗಳು ಉತ್ಪತ್ತಿಯಾಗಿ ವಾಯುಮಾಲಿನ್ಯ ವಾಗುತ್ತಿದೆ.
None