ಕೆರೆಯ ಹೆಜ್ಜೆ ಗುರುತು.... ನಾಗನಾಳ ಬಸವೇಶ್ವರ ಕೆರೆಗೆ ಗ್ರಾಮಸ್ಥರು ಮತ್ತು ಕೆರೆ ಅಭಿವೃದ್ಧಿ ಪುನಃಚೇತನ ಸಮಿತಿ ಸದಸ್ಯರು ಎಳೆನೀರು ನೀಡುವ ಮೂಲಕ ದಾನಿ ಸಂಸ್ಥೆಯ ಮುಖ್ಯಸ್ಥರನ್ನು ಆಹ್ವಾನಿಸಿ ಗೌರವಿಸಿದರು. ಕೆರೆಯ ಕಾವಲುಕಾಯುವ ಬಾಟಗಂಗಮ್ಮ ದೇವತೆಗೆ ಪೂಜೆ ಮಾಡಿ ನಂತರ ಯೋಜನೆಯ ಸಂಯೋಜಕರಾದ ರಾಮಕೃಷ್ಣಗೌಡ್ರು ಪರಿಚಯ ಮಾಡುವ ಮೂಲಕ ಕೆರೆಯ ದಾಖಲೆಗಳನ್ನು ಪರಿಶೀಲಿಸಿ ಸಮಿತಿಯ ಜೊತೆಗೆ ಮಾತಾನಾಡಿ ಕೆರೆಗಳ ಜೊತೆಗೆ ನಾವು ಎನ್ನುವ ಆಶಯದೊಂದಿಗೆ ಗ್ರಾಮಸ್ಥರು ಮತ್ತು ಸಮಿತಿಯ ಸದಸ್ಯರುಗಳು ಕೊಡ ಹಣಕಾಸಿನ ವ್ಯವಹಾರಗಳನ್ನು ‌ಶೇರ್ ಮಾಡುವ ಮೂಲಕ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡಿ ಬೇಗ ಬೇಗನೇ....ಗ್ರಾಮವಿಕಾಸಕ್ಕೆ ಹೋದರು. ನಂತರ ಗ್ರಾಮದಲ್ಲಿ ಬಸವೇಶ್ವರ ದೇವಾಲಯ ಮುಂದೆ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು,ಮಹಿಳೆಯರಿಗೆ ಸಮಾಂತರ ಬಹುಮಾನ ವಿತರಿಸಿ ಸಮಿತಿ ಅಧ್ಯಕ್ಷ, ಗ್ರಾಮಪಂಚಾಯಿತಿ ಅಧ್ಯಕ್ಷರಾದ ರಮೇಶ್ ಬಾಬು ಮಾತಾನಾಡಿ ನಮ್ಮ ಗ್ರಾಮದಲ್ಲಿ ಕೆರೆ ಅಭಿವೃದ್ಧಿ ‌ನಮ್ಮೇಲರ ಹೊಣೆ ಯಂಗ್ ಇಂಡಿಯಾ ಮತ್ತು ಗ್ರಾಮವಿಕಾಸ ನಮ್ಮ ಹಳ್ಳಿಯಲ್ಲಿ ಕೆರೆಯಲ್ಲಿ ಹೂಳು ತೆಗೆದು ರೈತ ಸ್ನೇಹಿ ಅಗಿ ಕೆಲಸ ಮಾಡಿ ಒಂದು ಕೋಟಿ ಲೀಟರ್ ನೀರು ಸಂಗ್ರಹಿಸುವ ಯೋಜನೆ ಮಾಡಿ ನಮ್ಮಗೆ ಸಹಕರಿಸಿದ್ದಾರೆ.ಇದೆ ರೀತಿ ನಮ್ಮ ಸಹಕಾರ ನೀಡೋಣ ಎಂದು ತಿಳಿಸಿದರು.
None