ಕೋಲಾರ ಜು.೨೦ : ವಿಶೇಷ ಚೇತನರಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಪೋಷಕರು ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕೆಂದು ಯಂಗ್ ಇಂಡಿಯಾ ಅಧ್ಯಕ್ಷರಾದ ಹೂಹಳ್ಳಿ ನಾಗರಾಜ್ ತಿಳಿಸಿದರು. ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ, ಗ್ರಾಮ ವಿಕಾಸ ಮತ್ತು ರೋಟರಿ ಕೋಲಾರ ಲೇಕ್ ಸೈಡ್ ವತಿಯಿಂದ ಕೋಲಾರ ತಾಲ್ಲೂಕಿನ ಜೂಹಳ್ಳಿ ಗ್ರಾಮದ ೮ನೇ ತರಗತಿ ವಿದ್ಯಾರ್ಥಿ ಅಲ್ತಾಮಸ್‌ಗೆ ವಿಲ್ ಚೇರ್ ನೀಡುವ ಮೂಲಕ ಚಾಲನೆ ಮಾಡಿ ಮಾತನಾಡಿದರು. ವಿಶೇಷ ಚೇತನರಿಗೆ ಅನುಕಂಪ, ಕರುಣೆಗಿಂತ ಪ್ರೋತ್ಸಾಹ ಅತ್ಯಗತ್ಯ. ಅವರನ್ನು ಮುಖ್ಯ ವಾಹಿನಿಗೆ ತರುವ ಮತ್ತು ಎಲ್ಲರಂತೆ ಅವರನ್ನು ಗೌರವಿಸುವ ಕೆಲಸ ಸಮಾಜದ ಪ್ರತಿಯೊಬ್ಬರ ಮೇಲಿದೆ. ಸಮಾನತೆಯ ಹಾದಿಯಲ್ಲಿ ನಾವೆಲ್ಲಾ ಸಾಗಬೇಕು ಎಂದರು. ಮಹಿಳಾ ಸಂರಕ್ಷಣಾ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಕೋಲಾರ ಲಕ್ಷ್ಮಿ ಮಾತನಾಡಿ ಮತ್ತಷ್ಟು ವಿಲ್ ಚೇರ್ ನೀಡುವ ಉದ್ದೇಶವನ್ನು ನಮ್ಮ ಹೊಂದಿದ್ದು ವಿಕಲಚೇತನ ಪರವಾಗಿ ಸ್ವಯಂ ಸೇವಕರಾಗಿ ಕೆಲಸ ಮಾಡಿ ವಿಕಲಚೇತನರು ಗೌರವ ಬದುಕುಗಳನ್ನು ಕಟ್ಟಿಕೊಳ್ಳಲು ನಾವು ಮುಂದೆ ಇರುತ್ತೇವೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಬಾಬಜಾನ್, ಸಂಸ್ಥೆಯ ಕಾರ್ಯದರ್ಶಿಯಾದ ಉದಯ್ ಕುಮಾರ್, ವಿಕಲಚೇತನರ ಸ್ವಾಭಿಮಾನಿ ಬಳಗದ ಶಾಂತ, ಗೀತಮ್ಮ, ಸ್ವಯಂ ಸೇವಕರಾದ ಅಮ್ಮನಲ್ಲೂರು ಪ್ರಸನ್ನ ಮುಂತಾದವರು ಭಾಗವಹಿಸಿದರು. ಹೂಹಳ್ಳಿ ನಾಗರಾಜ್
None